ಕ್ಷಣಗಳು ಉರುಳುತ್ತಿದ್ದವು. ಅಲ್ಲಿ ಸೇರಿದ್ದ ಸಹಸ್ರಾರು ಜನರಲ್ಲಿ ಕುತೂಹಲ ಹೆಚ್ಚುತ್ತಿತ್ತು. ಮುಂದೆ ನಡೆಯಲಿರುವುದು ಏನು ಎಂದು ಗೊತ್ತಾದವರ ಮನದಲ್ಲಂತೂ ಆತಂಕ ಮನೆಮಾಡಿತ್ತು. ‘ಓ ದೇವರೆ! ಆ ಹುಡುಗಿಗೆ ಅನಾಹುತ ಆಗದೇ ಇರಲಪ್ಪ’ ಎಂದು ದೇವರನ್ನು ಮೊರೆಯಿಡುತ್ತಿದ್ದವರು ಅನೇಕರು.
ಆದರೆ ಆ ರೊಮಾಂಚನಕಾರಿ ಘಟನೆ ಸುಖಾಂತ್ಯ ಕಂಡಾಗ ಎಲ್ಲರ ಮುಖದಲ್ಲೂ ಸಂತಸದ ಮಂದಹಾಸ. ಜೊತೆಗೆ ಆ ಹುಡುಗಿಯ ಮೊಗದಲ್ಲಿಯೂ ಏನೋ ಸಾಧಿಸಿದ ಸಾರ್ಥಕ ಭಾವ.
ವಿಶ್ವ ಏಡ್ಸ್ ದಿನಾಚರಣೆಯ ನಿಮಿತ್ತ ಏಡ್ಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಅಂತರರಾಷ್ಟ್ರೀಯ ಮಟ್ಟದ ಜಾದೂಗಾರ್ತಿ ಹಾಗೂ ’ಧ್ವನಿಮಾಯೆ’ (ವೆಂಟ್ರಿಲಾಕ್ವಿಸಂ) ಕಲಾವಿದೆ, ‘ಡಿಂಕು ಮೇಡಂ’ ಎಂದೇ ಪ್ರಸಿದ್ಧರಾದ ಆರ್.ಇಂದುಶ್ರೀ ಪ್ರದರ್ಶಿಸಿದ ‘ಸಜೀವ ದಹನ’ದಲ್ಲಿ (ಬರ್ನ್ಟ್ ಅಲೈವ್) ಕಂಡುಬಂದ ದೃಶ್ಯಗಳಿವು.
ಏಡ್ಸ್ ಕುರಿತಾಗಿ ಜನರಲ್ಲಿ ಮನೆಮಾಡಿರುವ ತಪ್ಪು ಕಲ್ಪನೆಗಳನ್ನು ಮತ್ತು ಏಡ್ಸ್ ಸೋಂಕಿತರ ಬಗ್ಗೆ ಸಮಾಜದ ತಿರಸ್ಕಾರವನ್ನು ಅಳಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಆಕೆಯ ಅಪಾಯಕಾರಿ ಸಾಹಸಮಯ ‘ಸಜೀವ ದಹನ’ ಪ್ರೇಕ್ಷಕರ ಹೃದಯ ಬಡಿತವನ್ನು ಕ್ಷಣಕಾಲ ಹಿಡಿದಿಟ್ಟಿತ್ತು.
ಅದೆಲ್ಲ ನಡೆದದ್ದು ಹೀಗೆ. ಇಂದುಶ್ರೀ ಕೈಗೆ ಬೇಡಿ ತೊಡಿಸಿ, ದೇಹವನ್ನು ಕಬ್ಬಿಣದ ಸರಪಳಿಯಿಂದ ಬಂಧಿಸಿ ಏಡ್ಸ್ ಕುರಿತಾದ ತಪ್ಪು ಕಲ್ಪನೆಗಳ ಬರವಣಿಗೆಯುಳ್ಳ ನಾಲ್ಕಡಿ ಎತ್ತರದ ಕಟ್ಟಿಗೆಯ ಪೆಟ್ಟಿಗೆಯಲ್ಲಿ ಅವರನ್ನು ಇಳಿಸಲಾಯಿತು. ನಂತರ ಪೆಟ್ಟಿಗೆ ಮುಚ್ಚಳವನ್ನು ಮೊಳೆಗಳಿಂದ ಭದ್ರಪಡಿಸಲಾಯಿತು. ಮೈದಾನದಲ್ಲಿ ಎಲ್ಲರೂ ನೋಡುತ್ತಿರುವಂತೆ ಪೆಟ್ಟಿಗೆಗೆ ಸೀಮೆ ಎಣ್ಣೆ ಸುರಿದು ಬೆಂಕಿಯಿಡಲಾಯಿತು.
ಧಗ ಧಗಿಸಿ ಉರಿಯುವ ಪೆಟ್ಟಿಗೆ ಕಂಡು ಮೈದಾನದ ತುಂಬೆಲ್ಲ ಭೀತಿ. ಏನಾಗುವುದೋ ಎಂಬ ಭಯ. ಕೆಲವೇ ಕ್ಷಣದಲ್ಲಿ ಸ್ವಲ್ಪ ದೂರದಲ್ಲಿ ಇದ್ದಕ್ಕಿದ್ದಂತೆ ಪಟಾಕಿ ಸದ್ದು. ಅತ್ತ ಹೊರಳಿದರೆ ಅಲ್ಲಿ ಇಂದುಶ್ರೀ ಪ್ರತ್ಯಕ್ಷ. ಹೆದರಿದವರ ಮುಖಗಳಲ್ಲಿ ಆಶ್ಚರ್ಯ.
‘ಸಜೀವ ದಹನ’ ಪ್ರದರ್ಶನಕ್ಕೂ ಮೊದಲು ಟಿಂಕು ಬೊಂಬೆಯೊಂದಿಗೆ ಕಾರ್ಯಕ್ರಮ ನೀಡಿದ ಇಂದುಶ್ರೀ ಏಡ್ಸ್ ಪೀಡಿತರನ್ನು ಕುಟುಂಬ ಹಾಗೂ ಸಮಾಜ ನಡೆಸಿಕೊಳ್ಳುವ ರೀತಿಯನ್ನು ಖಂಡಿಸಿದರು. ಏಡ್ಸ್ ಮತ್ತು ಎಚ್‌ಐವಿ ಕುರಿತಾಗಿ ಇರುವ ತಪ್ಪು ಕಲ್ಪನೆಗಳ ಮನವರಿಕೆ ಮಾಡಿಕೊಟ್ಟರು.
ಏಡ್ಸ್ ಜಾಗೃತಿ ಆಂದೋಲನದ ಪ್ರಚಾರ ರಾಯಭಾರಿ ಚಿತ್ರನಟಿ ಪೂಜಾ ಗಾಂಧಿ, ಹಿರಿಯ ನಟ ರಾಜೇಶ್, ಇಂದುಶ್ರೀ ಗುರುಗಳಾದ ಉದಯ ಜಾದೂಗಾರ್, ಕನ್ನಡ ಸೇನೆಯ ಕುಮಾರ್, ಪ್ರೊ. ಕೃಷ್ಣೇಗೌಡ, ಕೆಪಿಎನ್ ಪ್ಲಸ್ ಅಧ್ಯಕ್ಷೆ ಸರೋಜಾ ಪುತ್ರನ್ ಸೇರಿದಂತೆ ಹಲವರು ಈ ಚಮತ್ಕಾರಕ್ಕೆ ಸಾಕ್ಷಿಯಾಗಿದ್ದರು.
( ಪ್ರಜಾವಾಣಿ ದಿನಪತ್ರಿಕೆಯ ಬೆಂಗಳೂರು ಮೆಟ್ರೋ ಪುರವಣಿಯಲ್ಲಿ ಮಂಗಳವಾರ, ಡಿಸೆಂಬರ 14, 2010 ರಂದು ಪ್ರಕಟವಾದ ಲೇಖನ)

No comments:
Post a Comment