
ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಪಂಜಾಬ ಮೂಲದ ರುಚಿಕಾ ಕಲ್ರಾ ಮೋಟ್ವಾನಿ ವೃತ್ತಿಯಿಂದ ವರ್ಣಚಿತ್ರ ವಿನ್ಯಾಸಕಿ (ಗ್ರಾಫಿಕ್ ಡಿಜೈನರ್). ಸ್ವತಂತ್ರ ಚಿತ್ರ ವಿನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಾ 'ಡಿಜೈನ್ ಸ್ಟುಡಿಯೋ' ತೆರೆದು ಇಂದಿಗೂ ಕಲೆ ಮತ್ತು ಸಮುದಾಯದ ನಡುವೆ ಸಂಬಂಧ ಬೆಸೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಏಕಲವ್ಯನಂತೆ ಗುರುವಿಲ್ಲದೆ ಸ್ವಯಂ ಶ್ರದ್ದೆಯಿಂದ ಕಲೆಯನ್ನು ಮೈಗೂಡಿಸಿಕೊಂಡ ರುಚಿಕಾ ಸಡಿ ರಲ್ಲಿ ಪ್ರಥಮ ಬಾರಿಗೆ ತಮ್ಮ ವರ್ಣಚಿತ್ರ ಸಂಗ್ರಹದ ಪ್ರದರ್ಶನ ನಡೆಸಿದರು. ನಂತರದಲ್ಲಿ ವಿಶ್ವದಾದ್ಯಂತ ಹಲವಾರು ಏಕವ್ಯಕ್ತಿ ಹಾಗೂ ಸಮೂಹ ವರ್ಣಚಿತ್ರ ಪ್ರದರ್ಶನಗಳಲ್ಲಿ ತಮ್ಮ ಕಲೆಯ ಸೃಜನಶೀಲತೆಯನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ.
ಅಮೆರಿಕದ ಸ್ಯಾನಫ್ರಾನ್ಸಿಸ್ಕೊ ಕಲಾ ಅಕಾಡೆಮಿಯಿಂದ ಚಿತ್ರಕಲೆಗೆ ಸಂಬಂಧಿಸಿದ ಹೆಚ್ಚಿನ ಜ್ಞಾನ ಹಾಗೂ ತಾಂತ್ರಿಕ ಕೌಶಲ ಪಡೆದುಕೊಂಡಿದ್ದಾರೆ. ಸ್ವತಂತ್ರ ಬದುಕಿನ ಮಹಿಳೆ ಮತ್ತು ಆಕೆಯ ನಾನಾ ಅಭಿವ್ಯಕ್ತಿಗಳು, ನಿಸರ್ಗ ರುಚಿಕಾ ಅವರ ಬಹುತೇಕ ಕಲೆಗಳಿಗೆ ಸ್ಫೂರ್ತಿ. ಅದನ್ನೆ ಮೂಲವಾಗಿಟ್ಟುಕೊಂಡು ಕ್ಯಾನ್ವಾಸ್ ಮೇಲೆ ಹೊಸ ಹೊಸ ತಂತ್ರ ಪ್ರಯೋಗಿಸಿ ಹೊಳಪಿನ ಬಣ್ಣಗಳಿಂದ ಸೃಷ್ಟಿಸಿದ್ದಾರೆ.
ತಮ್ಮ ಪತಿ ರಾಜೇಶ್ ಜತೆಗೂಡಿ ೨೦೦೮ ರಲ್ಲಿ ೩ ಪೀಲ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಅದರ ಮೂಲಕ ಮಕ್ಕಳಲ್ಲಿ ಚಿತ್ರಕಲಾ ಆಸಕ್ತಿ ಬೆಳೆಸುತ್ತಿದ್ದಾರೆ. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಚಿತ್ರ ಕಲೆ ಒಲವು ಬೆಳೆಸುವುದರಿಂದ ಅವರಲ್ಲಿ ಆತ್ಮವಿಶ್ವಾಸ, ಬೌದ್ದಿಕ ಮಟ್ಟ ಹೆಚ್ಚಿ
ನಕಾರಾತ್ಮಕ ಮನೋಭಾವ ಕಡಿಮೆಯಾಗುತ್ತದೆ. ಸೃಜನಶೀಲತೆಗೆ ಸಹಾಯವಾಗುತ್ತದೆ ಎನ್ನುತ್ತಾರೆ ರುಚಿಕಾ.
'ಪ್ರಜಾವಾಣಿ' ದಿನಪತ್ರಿಕೆಯ ಬೆಂಗಳೂರಿನ 'ಮೆಟ್ರೊ ಗುರುವಾರ' ಪುರವಣಿಯಲ್ಲಿ ಡಿಸೆಂಬರ ೯ ರಂದು ಪ್ರಕಟವಾದ ಲೇಖನ.
'ಪ್ರಜಾವಾಣಿ' ದಿನಪತ್ರಿಕೆಯ ಬೆಂಗಳೂರಿನ 'ಮೆಟ್ರೊ ಗುರುವಾರ' ಪುರವಣಿಯಲ್ಲಿ ಡಿಸೆಂಬರ ೯ ರಂದು ಪ್ರಕಟವಾದ ಲೇಖನ.
No comments:
Post a Comment