ಅಲ್ಲಿ ಹಲವರು ಅಪ್ಪಿ ಆಲಂಗಿಸುವುದು , ಮುತ್ತು ನೀಡುವುದು, ಮೋಜಿನಾಟವಾಡುತ್ತಿದ್ದರೆ, ಮತ್ತೆ ಹಲವರು ತಮ್ಮದೆ ಬಿಂಕ ಬಿಗುಮಾನಗಳಿಂದ ಬಿಗುತ್ತಿದ್ದರು. ಇವರಿರ್ವರ ಮಧ್ಯೆ ತಮ್ಮ ವಿಶಿಷ್ಟ ಶೈಲಿ ಕೂದಲಿನಿಂದ ತುಂಬಿದ ಮೈ ಬಳುಕಿಸುತ್ತ ಛಾಯಾಗ್ರಾಹಕರತ್ತಲೇ ಪೋಸು ಕೊಡುತ್ತಿದವರಂತೂ ರೂಪದರ್ಶಿಯರಿಗೇನು ಕಡಿಮೆಯಿರಲಿಲ್ಲ. ಕೊನೆಗೆ ನಡಿಗೆಗೆಂದು ಕರೆದ್ಯೊಯುವಾಗ ಒಬ್ಬರನ್ನೊಬ್ಬರು ಹಿಂದಿಕ್ಕುವ ಜಂಬದ ಮೇಲಾಟ. ಆದರೆ ಇವರ್ಯಾರಿಗೂ ಇರಲಿಲ್ಲ ಉಡುಗೆ!
ಅರೇ ರೂಪದರ್ಶಿಯರಿಗೂ ಮಿರಿದವರ ಉಡುಗೆ ಇಲ್ಲದ ನಡುಗೆ ಇದ್ಯಾವುದೆಂದಿರಾ? ಇದು ಪ್ರಾಣಿಗಳ ಹಕ್ಕು ಮತ್ತು ಆರೈಕೆ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ರೋಟರಿ ಬೆಂಗಳೂರು ಐಟಿ ಕಾರಿಡಾರ್ ಆಯೋಜಿಸಿದ್ದ 'ಪೆಟ್ ಎ ಥಾನ್'. ಹಳೇ ಏರಪೋರ್ಟ್ ರಸ್ತೆಯಲ್ಲಿರುವ ರುಸ್ತುಮ್ ಬಾಗ್ ನಲ್ಲಿ ನಡೆದ ಸಾಕು ನಾಯಿಗಳ ಮ್ಯಾರಥಾನ್.
ಆರೋಗ್ಯಕರ ಜೀವನಕ್ಕಾಗಿ ಹತ್ತು ಹಲವು ವಿಷಯಗಳ ಕುರಿತು ಮನುಷ್ಯರ ಮ್ಯಾರಥಾನ್ ನಡೆಸುವುದು ನೋಡಿದ್ದೇವೆ. ಆದರೆ ಮನುಷ್ಯನ ನಂಬಿಕೆಯ ಸಾಕು ಪ್ರಾಣಿಯಾದ ನಾಯಿಗಳಿಗಾಗಿ ನಡೆಸಲಾದ ಈ ಮ್ಯಾರಥಾನ್ ವಿಶಿಷ್ಟ. ಪ್ರಾಣಿ ಪ್ರಿಯರು ಮುದ್ದಿನ ಸಾಕುನಾಯಿಗಳನ್ನು ಕರೆತಂದರು. ಪಗ್ಗ್, ಗೋಲ್ಡನ್ ರಿರ್ಟಿವೋರ್, ಡಾಲ್ಮೆಸಿಯನ್, ಬಿಗಲ್, ಪೊಮೆರಿಯನ್, ಬಾಕ್ಸರ್, ಲ್ಯಾಂಬ್ರಿಡಿರ್, ಮುಂತಾದ ತಳಿಗಳ ೪೦ ಕ್ಕೂ ಅಧಿಕ ನಾಯಿಗಳು ಪಾಲ್ಗೊಂಡಿದ್ದವು.
ಕಾರ್ಯಕ್ರಮದಲ್ಲಿ ಪಶುವೈದ್ಯ ಡಾ.ಪವನಕುಮಾರ್ ಸಾಕು ನಾಯಿಗಳ ಮರಿಗಳ ಆಯ್ಕೆ, ಆಹಾರ ಕ್ರಮ, ಪಾಲನೆ, ಶುಚಿತ್ವ, ಸಂತಾನೋತ್ಪತ್ತಿ, ರೋಗರುಜಿನಗಳ ಕುರಿತಾಗಿ ಮಾಹಿತಿ ನೀಡಿದರು. ಮನೆ ಪರಿಸರದಲ್ಲಿ ಕಾಲ ಕಳೆದು ಬೇಸರಗೊಂಡಿದ್ದ ಶ್ವಾನಗಳು ಮಾತ್ರ ಮ್ಯಾರಥಾನ್ ನಲ್ಲಿ ಹುರುಪಿನಿಂದಲೇ ಭಾಗವಹಿಸಿ ಹೊಸದಾಗಿ ಪರಿಚಯವಾದ ಸ್ನೇಹಿತರೊಂದಿಗೆ ಖುಷಿಯಿಂದ ಕಾಲಕಳೆದವು. ಕೊನೆಗೆ ಮನೆಗೆ ಕರೆದ್ಯೊಯುವಾಗ ಮಾತ್ರ ಹೊಸ ಹೆಂಗೆಳೆಯರನ್ನು ಮನೆಗೆ ಕರೆಯೋಣ ಎಂದು ರಚ್ಚೆ ಹಿಡಿಯುವ ಮಗುವಿನಂತೆ ಕೊಸರಾಡುತ್ತಿದ್ದದ್ದು ಕಂಡುಬಂತು.
ಪೆಟ್ ಸ್ಟೇಪಿನ್, ಅನ್ವಿಸ್ ಇನ್ ಕಾರ್ಪೊರೇಷನ್, ಪಿಡಬ್ಲುಎಸ್ ಪೆಟ್ ಶಾಪ್, ಡಬ್ಲೂಎಜಿಎ, 'ಸೆಸ್ಸನಾ ಲೈಫ್ ಲೈನ್' ಪಶು ಆಸ್ಪತ್ರೆ ಮತ್ತು 'ಮಡ್ಡಿ ಪಾವಜ್' ನಾಯಿ ಅಲಂಕಾರ ಸಲೂನ್ ಗಳು ಸಹಯೋಗದ ಈ ಕಾರ್ಯಕ್ರಮದಲ್ಲಿ ಪ್ರಾಣಿ ಕಲ್ಯಾಣಕ್ಕೆ ಶ್ರಮಿಸುವ
ಸಂಸ್ಥೆಗಳಿಗೆ ದೇಣಿಗೆ ಸಂಗ್ರಹಿಸಲಾಯಿತು.
(ಪ್ರಜಾವಾಣಿ ದಿನಪತ್ರಿಕೆಯ ಬೆಂಗಳೂರು ಮೆಟ್ರೋದಲ್ಲಿ ಗುರುವಾರ 2,2010 ರಂದು ಪ್ರಕಟವಾದ ಲೇಖನ)

No comments:
Post a Comment