ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಹುತೇಕ ಪೊಲೀಸ್ ಅಧಿಕಾರಿಗಳು ವಿಶ್ರಾಂತಿಯ ಜೀವನ ನಡೆಸಲು ಬಯಸುತ್ತಾರೆ. ಕೃಷಿ, ತೋಟಗಾರಿಕೆ ಅಥವಾ ಬೇರೆ ಯಾವುದಾದರೂ ಕೆಲಸದಲ್ಲಿ ತೊಡಗುವವರು ಅಪರೂಪ.
ನಿವೃತ್ತ ಅಧಿಕಾರಿ ರೈತ ಕುಟುಂಬದಿಂದ ಬಂದವರಾಗಿದ್ದರೆ ಅವರು ಕೃಷಿ - ತೋಟಗಾರಿಕೆಯ ಬದುಕಿಗೆ ಮರಳಲು ಹವಣಿಸುತ್ತಾರೆ. ಉಳಿತಾಯದ ಹಣವನ್ನು ಕೃಷಿಯಲ್ಲಿ ತೊಡಗಿಸಿ ಅದೃಷ್ಟ ಪರೀಕ್ಷಿಸುತ್ತಾರೆ. ಕೆಲವರು ಯಶಸ್ವಿಯೂ ಆಗುತ್ತಾರೆ. ಹೀಗೆ ಯಶಸ್ವಿಯಾದವರಲ್ಲಿ ಧಾರವಾಡದ ನಿವೃತ್ತ ಪೊಲೀಸ್ ಡಿವೈಎಸ್ಪಿ ಎಸ್.ಎಸ್.ರೋಣದ ಅವರೂ ಒಬ್ಬರು.
ನಿವೃತ್ತಿಯ ನಂತರ ರೋಣದ್ ಅವರು ವಿಶ್ರಾಂತ ಜೀವನ ನಡೆಸಲು ಬಯಸಲಿಲ್ಲ. ತಮ್ಮ ಮನೆತನದ ವೃತ್ತಿ ಕೃಷಿ ತೋಟಗಾರಿಕೆಗಳಲ್ಲಿ ತೊಡಗಿಸಿಕೊಂಡರು. ಹತ್ತಾರು ವರ್ಷಗಳ ಕಾಲ ಬೇಸಾಯ ಮಾಡಿದ ಅನುಭವಿಯಂತೆ ದುಡಿದು ಯಶಸ್ಸು ಕಂಡರು.
ರೋಣದ ಅವರ ಕೃಷಿ ಮತ್ತು ತೋಟಗಾರಿಕೆಯ ಆಸಕ್ತಿ ಎಷ್ಟೆಂಬುದನ್ನು ನೋಡಬೇಕಾದರೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರವಾಡ ಹೊರ ವಲಯದ ನವಲೂರು ರೈಲ್ವೆ ಸೇತುವೆ ಪಕ್ಕದಲ್ಲಿರುವ ಅವರ `ಶಿಶಿರ ಪುಡ್ಸ್ ಅಂಡ್ ಫಾರ್ಮ್'ಗೆ ಹೋಗಬೇಕು.
ರೋಣದ ಅವರದು ಹಸನ್ಮುಖಿ ವ್ಯಕ್ತಿತ್ವ. ಮಿತ ಭಾಷಿ. ನಿವೃತ್ತಿಯ ನಂತರವೂ ಪೊಲೀಸ್ ಅಧಿಕಾರಿಯ ಗತ್ತು ಇನ್ನೂ ಅವರಲ್ಲಿ ಉಳಿದುಕೊಂಡಿದೆ. ಆದರೆ ಅವರ ಸರಳತೆ ಗತ್ತುಗಾರಿಕೆಯನ್ನು ಮರೆಮಾಚುತ್ತದೆ.
ಅವರ ಆರು ಎಕರೆಯ ಫಾರಂನಲ್ಲಿ ಒಂದು ಸುತ್ತು ಹಾಕಿ ಬಂದರೆ ಅವರ ಆಸಕ್ತಿ, ಅಭಿರುಚಿ ಮತ್ತು ಪರಿಶ್ರಮ ಎದ್ದು ಕಾಣುತ್ತದೆ. ಮಾವು, ಸಪೋಟ, ಪಪ್ಪಾಯಿ, ಹೀರೆ, ಸೌತೆ, ಬದನೆ ಮತ್ತಿತರ ತರಕಾರಿಗಳನ್ನು ಬೆಳೆಯುತ್ತಾರೆ. ಪಪ್ಪಾಯಿ ಅವರ ಪ್ರಮುಖ ಬೆಳೆ. ಕಳೆದ ಏಳೆಂಟು ವರ್ಷಗಳಿಂದ ಪಪ್ಪಾಯಿ ಬೆಳೆಯುತ್ತಿರುವ ಅವರಿಗೆ ಸಾಕಷ್ಟು ನಷ್ಟವೂ ಆಗಿದೆ. ನಷ್ಟದ ನಡುವೆಯೂ ಪಪ್ಪಾಯಿ ಮಾರುಕಟ್ಟೆ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಲೇ ಇದ್ದಾರೆ.
ಕೃಷಿಯಲ್ಲಿ ಆದ ನಷ್ಟ ತುಂಬಿಕೊಳ್ಳಲು ಕೆಲ ವರ್ಷ ಹಸು ಸಾಕಿ ಹಾಲು ಮಾರಾಟ ಮಾಡಿದ್ದರು. ಮಿನರಲ್ ವಾಟರ್ ಘಟಕ ಆರಂಭಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. `ಸುಜಲ' ಹೆಸರಿನ ಬಾಟಲಿ ನೀರು ಧಾರವಾಡ, ಬೆಳಗಾವಿ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಜನಪ್ರಿಯವಾಗಿದೆ.
ರೋಣದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಯಕಲಾಸಪುರದವರು. ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಪದವಿ ಮುಗಿಸಿ, 1967ರಲ್ಲಿ ಪಿ.ಎಸ್.ಐ ಹುದ್ದೆಗೆ ಆಯ್ಕೆಯಾದರು. ಸುಮಾರು 34 ವರ್ಷ ಸೇವೆ ಸಲ್ಲಿಸಿ ಡಿ.ವೈಎಸ್ಪಿ ಆಗಿ ನಿವೃತ್ತರಾಗಿ ಧಾರವಾಡದಲ್ಲಿ ಈಗ ನೆಲೆಸಿದ್ದಾರೆ.
ಇಪತ್ತೈದು ವರ್ಷಗಳ ಹಿಂದೆ ನವಲೂರಿನಲ್ಲಿ ಖರೀದಿಸಿದ್ದ ಆರು ಎಕರೆ ಭೂಮಿಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುತ್ತ ಬಂದಿದ್ದಾರೆ. ಆರು ಎಕರೆಯಲ್ಲಿ 220 ಸಾಗವಾನಿ ಮರಗಳು, 155 ತೆಂಗಿನ ಮರಗಳು, 220 ಸಪೋಟಾ ಗಿಡಗಳು ಜತೆಗೆ ವಿವಿಧ ತಳಿಯ ಮೂವತ್ತಕ್ಕೂ ಹೆಚ್ಚು ಮಾವಿನ ಗಿಡಗಳನ್ನು ಬೆಳೆಸಿದ್ದಾರೆ. ಫಾರಂನಲ್ಲಿರುವ ಗಿಡ, ಮರಗಳು ಸಮೃದ್ಧವಾಗಿವೆ.
ಈಗ `ಟಾರಲೆಟ್ ಪ್ರಿನ್‌ಸೆಸ್' ಎಂಬ ದೇಶಿ ತಳಿಯ ಪಪ್ಪಾಯಿಯ ಸುಮಾರು 3,000 ಸಸಿಗಳನ್ನು ನಾಟಿ ಮಾಡಿದ್ದಾರೆ. ಇನ್ನೂ ಎರಡೂವರೆ ಸಾವಿರ ಸಸಿಗಳ ನಾಟಿ ಮಾಡುವ ಉದ್ದೇಶವಿದೆ ಎನ್ನುತ್ತಾರೆ. ಯಾವುದೇ ಬೆಳೆ ಬೆಳೆಯುವ ಮೊದಲು ತಜ್ಞರ ಸಲಹೆ ಪಡೆಯುತ್ತಾರೆ. ಬೆಳೆಗಳಿಗೆ ರೋಗ ಬಾರದಂತೆ ಎಚರಿಕೆ ವಹಿಸುತ್ತಾರೆ. ತಪ್ಪು ನಿರ್ಧಾರಗಳಿಂದ ನಷ್ಟವಾಗದಂತೆ ಸಹಾ ಎಚ್ಚರಿಕೆ ವಹಿಸಿದ್ದೇ ಅವರ ಯಶಸ್ಸಿನ ಗುಟ್ಟು.
ಪಪ್ಪಾಯಿ ಗಿಡಗಳಿಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ. ಪಪ್ಪಾಯಿ ಹಣ್ಣುಗಳನ್ನು ದೇಶದ ಪ್ರಮುಖ ನಗರಗಳಿಗೆ ರವಾನಿಸಿ ಮಾರಾಟ ಮಾಡುವ ಬಯಕೆ ರೋಣದ ಅವರದು. ರೋಣದ ಅವರ ದೂರವಾಣಿ ಸಂಖ್ಯೆ - 94481 16302
(ಪ್ರಜಾವಾಣಿ ದಿನಪತ್ರಿಕೆಯ `ಕರ್ನಾಟಕ ದರ್ಶನ ಪುರವಣಿಯಲ್ಲಿ ಗುರುವಾರ, 5 ಜೂನ್ 2008 ರಂದು ಪ್ರಕಟವಾದ ಲೇಖನ)

No comments:
Post a Comment