ಮೂಲ ವಸ್ತುವನ್ನೇ ನಕಲು ಮಾಡಿ, ಅದುವೇ ಮೂಲ ವಸ್ತು ಎನ್ನುವಂತೆ ಮಾರುಕಟ್ಟೆಯಲ್ಲಿ ಬಿಕರಿ ಮಾಡುವ `ನಕಲಿ ಮಾಲು~ ದಂದೆಗೆ ಶತಮಾನದ ಇತಿಹಾಸವಿದೆ.
ಇಂಥ ನಕಲಿ ಉತ್ಪನ್ನಗಳ ತಯಾರಿಕೆ-ಮಾರಾಟ ದಶಕಗಳಿಂದ ಬಹಳ ವೇಗ ಪಡೆದುಕೊಂಡಿದೆ, ಹಾಗೂ ಕಡಿಮೆ ಬಂಡವಾಳಕ್ಕೆ ಅಧಿಕ ಲಾಭ ತಂದುಕೊಡುವ ಉದ್ಯಮ ಎನಿಸಿಕೊಂಡಿದೆ ಎನ್ನುತ್ತಾರೆ ಮಾರುಕಟ್ಟೆ ಪರಿಣತರು.
ಅಂತರರಾಷ್ಟ್ರೀಯ ನಕಲಿ ಉತ್ಪನ್ನಗಳ ನಿಗ್ರಹ ಒಕ್ಕೂಟ (ಐಎಸಿಸಿ) ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ ಕಳೆದ ಎರಡು ದಶಕಗಳಲ್ಲಿ ಸಾವಿರಾರು ಪಟ್ಟು ವೃದ್ಧಿ ಆಗಿರುವ ನಕಲಿ ವಸ್ತುಗಳ ತಯಾರಿಕೆಯು ಇಂದು ಜಾಗತಿಕ ಮಾರುಕಟ್ಟೆಯ ಒಟ್ಟಾರೆ ವಹಿವಾಟಿನ ಶೇ 10ಕ್ಕೂ ಅಧಿಕ ಪಾಲನ್ನೂ ಹೊಂದಿದೆ.
ವಿಶ್ವದ ವಿವಿಧ ದೇಶಗಳಲ್ಲಿನ ನಕಲಿ ಮತ್ತು ಕಳ್ಳಸಾಕಣೆ ವಸ್ತುಗಳ ಮಾರುಕಟ್ಟೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ ವಾರ್ಷಿಕ ವಹಿವಾಟು 60000-65000 ಕೋಟಿ ಅಮೆರಿಕನ್ ಡಾಲರ್‌ನಷ್ಟು ಎಂಬುದು ಒಂದು ಅಂದಾಜು. ಇದು 2015ರ ಹೊತ್ತಿಗೆ ದುಪ್ಪಟ್ಟಾಗುವ ಸಾಧ್ಯತೆ ಇದೆ ಎನ್ನುತ್ತದೆ `ಐಎಸಿಸಿ~ ಸಮೀಕ್ಷೆಯ ವರದಿ.
ಭಾರತದಲ್ಲಿ ಕೂಡ `ನಕಲಿ ವಸ್ತು~ಗಳ ಮಾರುಕಟ್ಟೆ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳು ಇಲ್ಲದ ಕಾರಣ ದೇಶದಾದ್ಯಂತ ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ನಕಲಿ ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ವಾಹನಗಳ ಬಿಡಿಭಾಗಗಳ ವ್ಯಾಪಾರ ವಹಿವಾಟು 2013ರ ಹೊತ್ತಿಗೆ ರೂ. 5 ಸಾವಿರ ಕೋಟಿಗೆ ತಲುಪುವ ಸಾಧ್ಯತೆ ಇದೆ ಎನ್ನುತ್ತದೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ನಡೆಸಿರುವ ಸಮೀಕ್ಷೆ.
ನಕಲಿ ದಾಖಲೆಗಳು ಹಾಗೂ ತೆರಿಗೆ ವಂಚನೆಯಿಂದ ಮಾರಾಟವಾಗುವ ನಕಲಿ ಉತ್ಪನ್ನಗಳು ದೇಶದ ಆರ್ಥಿಕತೆ, ಸಣ್ಣ ಉದ್ಯಮಗಳು, ಬಂಡವಾಳ ಹೂಡಿಕೆದಾರರು, ಚಿತ್ರರಂಗ, ಸಂಶೋಧಕರು ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಅಷ್ಟೇ ಪ್ರಮಾಣದಲ್ಲಿ ಸರ್ಕಾರ ಖಜಾನೆಗೆ, ಗ್ರಾಹಕರಿಗೆ ನಷ್ಟವನ್ನೂ ಉಂಟು ಮಾಡುವಂತದಾಗಿವೆ.
ಸದ್ಯ ದೇಶದಲ್ಲಿ ಕಾನೂನು ಬಾಹಿರ ಮಾರ್ಗಗಳ ಮೂಲಕ ರೂ. 45,000 ಕೋಟಿಗೂ ಅಧಿಕ ಮೌಲ್ಯದ ನಕಲಿ ಉತ್ಪನ್ನಗಳು ಮಾರಾಟವಾಗುತ್ತಿದ್ದು, ಇದರಿಂದಾಗಿ 2011-12ನೇ ಸಾಲಿನಲ್ಲಿ ದೇಶದ ಬೊಕ್ಕಸಕ್ಕೆ ರೂ. 5,000 ಕೋಟಿಗೂ ಅಧಿಕ ತೆರಿಗೆ ನಷ್ಟವಾಗಿದೆ~ ಎಂದಿದ್ದಾರೆ `ಅಸೋಚಾಂ~ನ ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್.
`ದೇಶದಾದ್ಯಂತ ಹಬ್ಬುತ್ತಿರುವ ಈ ನಕಲಿ ಉತ್ಪನ್ನಗಳ ತವರು ದೆಹಲಿ. ಇಲ್ಲಿಯೇ ಶೇ 75ಕ್ಕೂ ಅಧಿಕ ನಕಲಿ ವಸ್ತುಗಳು ತಯಾರಾಗುತ್ತವೆ. ಈ ನಕಲಿಗಳ ಹಾವಳಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಮತ್ತು ವಾಹನಗಳ ಬಿಡಿಭಾಗಗಳ ಮಾತ್ರವಲ್ಲದೇ ಗ್ರಾಹಕರು ಖರೀದಿಯ ವಸ್ತುಗಳು ಹಾಗೂ ಔಷಧಿಗಳಲ್ಲೂ ಕೂಡ ಕಂಡು ಬರುತ್ತಿರುವುದು ಆತಂಕಕಾರಿಯಾಗಿದೆ~ ಎಂದು ಕಳವಳ ವ್ಯಕ್ತಪಡಿಸಿದ್ದಾರೆ ರಾವತ್.
ದೇಶದ ಯುವ ಗ್ರಾಹಕರ ಮನಸ್ಥಿತಿಯನ್ನು ಚೆನ್ನಾಗಿ ಅರಿತಂತೆ ಇರುವ ಕೃತ್ರಿಮ ವಸ್ತುಗ ತಯಾರಕರು, ಜನಪ್ರಿಯ ಕಂಪೆನಿಗಳ ಬ್ರಾಂಡ್‌ಗಳ ಆಭರಣ ಸೇರಿದಂತೆ ಸೌಂದರ್ಯ ವರ್ಧಕಗಳು, ಬಟ್ಟೆ, ಶೂ, ವಾಚ್‌ಗಳು, ಚರ್ಮದ ಉತ್ಪನ್ನಗಳನ್ನು ಎಗ್ಗಿಲ್ಲದಂತೆ ಉತ್ಪಾದಿಸುತ್ತಿದ್ದಾರೆ. ಜತೆಗೆ ಸಿಡಿ, ಡಿವಿಡಿ, ತಂಬಾಕು, ಮದ್ಯ, ಸಿಗರೇಟ್, ಆಹಾರ ಉತ್ಪನ್ನಗಳು, ಕೀಟನಾಶಕಗಳು, ಗೃಹಬಳಕೆ ವಸ್ತುಗಳು, ಔಷಧಿಗಳು ಸೇರಿದಂತೆ ಅಸಂಖ್ಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಹರಿಬಿಡುತ್ತಿದ್ದಾರೆ.
ಅಸಲಿ ಉತ್ಪನ್ನಗಳ ತಯಾರಕರಿಗೆ ಕಳವಳ ಉಂಟು ಮಾಡುವಷ್ಟರ ಮಟ್ಟಿಗೆ ಇಂದು ಎಲ್ಲೆಡೆ ನಕಲಿ ವಸ್ತುಗಳ ಹಾವಳಿ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಅಧಿಕ ಕಮಿಷನ್ ಮತ್ತು ಲಾಭದ ಆಸೆಗಾಗಿ ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು ಈ ಕಳ್ಳದಂಧೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಭಾರತದ ಔಷಧಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ನಕಲಿ ಔಷಧಿಗಳ ಹಾವಳಿಯು ಅಧಿಕವಾಗಿದೆ. ರೂ. 25 ಕೋಟಿ ಮೌಲ್ಯದ ಔಷಧಿಗಳಲ್ಲಿ ಶೇ 40ಕ್ಕೂ ಅಧಿಕ ಪ್ರಮಾಣದವು ಕಳಪೆ ಗುಣಮಟ್ಟದಾಗಿರುತ್ತವೆ. ಇದರಿಂದಾಗಿ ಕ್ಯಾನ್ಸರ್ ಸೇರಿದಂತೆ ಅನೇಕ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಬಡ ಹಾಗೂ ಸಾಮಾನ್ಯ ವರ್ಗದ ರೋಗಿಗಳು ಪ್ರಾಣ ಕಳೆದುಕೊಳ್ಳುವಂತಾಗಿದೆ.
ಇನ್ನೊಂದೆಡೆ, ಚೌಕಾಶಿಗಿಳಿಯುವ ಮನೋಭಾವದ ಜನಸಾಮಾನ್ಯರನ್ನು ಈ ನಕಲಿ ಉತ್ಪನ್ನಗಳು ಅಸಲಿ ವಸ್ತುಗಳಿಗಿಂತ ಬಹುಬೇಗ ಸೆಳೆದುಕೊಳ್ಳುತ್ತವೆ. ಕಡಿಮೆ ಬೆಲೆ ಎಂಬ ಕಾರಣಕ್ಕೆ ಮಾರುಹೋಗುವ ಗ್ರಾಹಕರು ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸದೆ, ರಸೀದಿಯನ್ನೂ ಪಡೆಯದೆ ಇಂಥ ವಸ್ತುಗಳನ್ನು ಖರೀದಿಸುತ್ತಾರೆ.
ನಂತರ ಅವುಗಳಿಂದಾಗುವ ಅಪಾಯ ಹಾಗೂ ಹಾನಿಗೆ ಯಾವುದೇ ಕಾನೂನು ಬದ್ದ ಪರಿಹಾರ ಪಡೆಯಲಾರದ ಅಸಹಾಯಕರಾಗಿ, ನಷ್ಟ ಅನುಭವಿಸುತ್ತಾರೆ ಎನ್ನುತ್ತಾರೆ ಮಾರುಕಟ್ಟೆ ಪರಿಣಿತರು.
`ಕಪ್ಪುಹಣ~ದಲ್ಲಿ ಕೂಡ ಈ ನಕಲಿ ಉತ್ಪನ್ನಗಳ ತಯಾರಕರ ಪಾಲಿದೆ. ಅಲ್ಲದೆ, ಇವರು ಅಪರಾಧ ಚಟುವಟಿಕೆಗಳಿಗೆ ಹಣ ನೀಡುವ ಮೂಲಕ ಅಪರಾಧಿ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಾರೆ ಎನ್ನುತ್ತದೆ ಸಮೀಕ್ಷೆ.
`ದೇಶದಲ್ಲಿರುವ ಕಾನೂನು ಕಠಿಣವಾಗಿರದ ಕಾರಣ ಈ ನಕಲಿ ಉತ್ಪನ್ನಗಳ ಹಾವಳಿ ಹೆಚ್ಚುತ್ತಿದೆ~ ಎನ್ನುವ ಅಸೋಚಾಂ, ನಕಲಿ ವಸ್ತುಗಳ ಹಾವಳಿ ತಡೆಗೆ ಬಾರ್ ಕೊಡಿಂಗ್ ವ್ಯವಸ್ಥೆ ಜಾರಿಗೆ ತರುವಂತೆ ಸರ್ಕಾರವನ್ನೂ ಆಗ್ರಹಿಸಿದೆ.
ದೇಶದ ಸುಸ್ಥಿರ ಆರ್ಥಿಕತೆಯ ದೃಷ್ಟಿಯಿಂದ ನಕಲಿ ವಸ್ತುಗಳನ್ನು ತಡೆಗಟ್ಟುವುದು ಭಾರತಕ್ಕೆ ಭವಿಷ್ಯದ ಬಹುದೊಡ್ಡ ಸವಾಲಾಗಿದೆ. ಇದು ಕೇವಲ ಹೂಡಿಕೆದಾರರು, ಉದ್ಯಮಗಳು, ಸರ್ಕಾರ ಮತ್ತು ಗ್ರಾಹಕರ ಮೇಲಷ್ಟೇ ಅಲ್ಲದೇ ಜಾಗತಿಕ ಮಟ್ಟದಲ್ಲಿ `ಭಾರತೀಯ ಉತ್ಪನ್ನ~ದ (ಬ್ರಾಂಡ್ ಇಂಡಿಯ) ಘನತೆಗೂ ಧಕ್ಕೆ ತರಲಿದೆ.
ಈ ಹಿನ್ನೆಲೆಯಲ್ಲಿ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟವು (ಎಫ್‌ಐಸಿಸಿಐ) ಎಲ್ಲ ವಾಣಿಜ್ಯೋದ್ಯಮ ಕ್ಷೇತ್ರಗಳ ಪರಿಣಿತರನ್ನು ಒಳಗೊಂಡಿರುವ `ಆರ್ಥಿಕತೆ ಹಾಳುಮಾಡುತ್ತಿರುವ ಕಳ್ಳ ಮತ್ತು ನಕಲಿ ಉತ್ಪನ್ನಗಳ ವ್ಯವಹಾರ ನಿಗ್ರಹ~ಕ್ಕೆ `ಎಫ್‌ಐಸಿಸಿಐ ಸಿಎಎಸ್‌ಸಿಎಡಿಇ~ ಎಂಬ ಸಮಿತಿಯೊಂದನ್ನು ರಚಿಸಿದೆ.
ಸಮಿತಿಯು ಈ ಪಿಡಗನ್ನು ಹತ್ತಿಕ್ಕುವ ನಿಟ್ಟಿನಲ್ಲಿ ವಿವಿಧ ಹಂತಗಳಲ್ಲಿ ಅಭಿಯಾನಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಹಕರಲ್ಲಿ ಕಳ್ಳ ಹಾಗೂ ನಕಲಿ ಉತ್ಪನ್ನಗಳ ಕುರಿತಾಗಿ ಜಾಗೃತಿ ಮೂಡಿಸುತ್ತಿದೆ.
ಅಲ್ಲದೆ, ಗ್ರಾಹಕ ವ್ಯವಹಾರ ಸಚಿವಾಲಯದ ಅಡಿಯಲ್ಲಿ `ಜಾಗೋ ಗ್ರಾಹಕ~ ಹಾಗೂ ದೆಹಲಿ ಸರ್ಕಾರದ ಸಹಭಾಗಿತ್ವದಲ್ಲಿ `ಭಾಗಿದಾರಿ~ ಎಂಬ ಅಭಿಯಾನಗಳನ್ನು ನಡೆಸುತ್ತಿದೆ. ಈ ಕಳ್ಳ ದಂಧೆಯನ್ನು ಹತ್ತಿಕ್ಕುವ ದಿಶೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಹಕ ಜಾಗೃತಿ ಚಳವಳಿಗಳಿಗೆ ಒತ್ತು ನೀಡುವುದರೊಂದಿಗೆ ಕಠಿಣ ಕಾನೂನುಗಳನ್ನು ಜಾರಿಗೆ ತರುವ ಅಗತ್ಯವಿದೆ.
( ಪ್ರಜಾವಾಣಿ ದಿನಪತ್ರಿಕೆಯ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಸೆಪ್ಟೆಂಬರ್ 26, 2012ರಂದು ಪ್ರಕಟವಾದ ಲೇಖನ)

No comments:
Post a Comment