ಪಕ್ಕದ ಮನೆಯ ಪದ್ದಕ್ಕನ 11 ವರ್ಷದ ಮಗಳು ಚಿಂಟು ಮೈನೆರೆದ ಸುದ್ದಿ ಕೇಳಿದ ಕಮಲಮ್ಮನಿಗೆ ಒಂದರೆಕ್ಷಣ ದಿಗಿಲಾಯಿತು. 11ನೇ ವಯಸ್ಸಿಗೇ ಚಿಂಟು ಮೈ ನೆರೆಯುವುದಾದರೆ 14 ವರ್ಷದ ತನ್ನ ಮಗಳು ಇನ್ನೂ ಯಾಕೆ ಹೆಣ್ತನದ ಹೊಸ್ತಿಲು ತುಳಿದಿಲ್ಲ ಎಂಬ ಚಿಂತೆ ಇನ್ನಿಲ್ಲದಂತೆ ಬಾಧಿಸತೊಡಗಿತು.
* **
ಚಿಕ್ಕಂದಿನಿಂದ ಎಲ್ಲದಕ್ಕೂ ತಮ್ಮನ್ನೇ ಅವಲಂಬಿಸುತ್ತಾ ತಮ್ಮ ಹಿಂದೆ ಮುಂದೆಯೇ ಸುತ್ತಾಡಿಕೊಂಡಿರುತ್ತಿದ್ದ ಒಬ್ಬನೇ ಮಗ ರಾಹುಲ್ ಚಿಗುರು ಮೀಸೆ ಮೂಡುತ್ತಿದ್ದಂತೆಯೇ ಖಿನ್ನನಾಗಿ ಮೌನಕ್ಕೆ ಮೊರೆ ಹೋದಾಗ, ದಿಕ್ಕೇ ತೋಚದ ಪರಿಸ್ಥಿತಿ ಉಷಾ ಮತ್ತು ರಾಜೇಶ್ ದಂಪತಿಯದು.
* **
ವರ್ಷದ ಹಿಂದೆ ಋತುಮತಿಯಾಗಿರುವ ಮಗಳು ಎರಡು- ಮೂರು ತಿಂಗಳಾದರೂ ಮುಟ್ಟಿನ ನೀರೆರೆದುಕೊಳ್ಳದ್ದನ್ನು ನೋಡಿದ ಚೆನ್ನಮ್ಮನಿಗೆ ಬರಸಿಡಿಲು ಬಡಿದ ಅನುಭವ. ಮಗಳು ಶಾಲೆಗೆ ಹೋಗುವಾಗ, ಬರುವಾಗ ಸಿಸಿಟಿವಿ ಕಣ್ಗಾವಲಿನಂತೆ ವಿಶೇಷ ಮುತುವರ್ಜಿ ವಹಿಸುತ್ತಿದ್ದ ಆಕೆಗೆ ಈ ಸಂಗತಿಯನ್ನು ಜೀರ್ಣಿಸಿಕೊಳ್ಳುವುದಕ್ಕೇ ಆಗುತ್ತಿಲ್ಲ.
ನೆರೆಹೊರೆಯವರೊಂದಿಗೆ ಹೇಳಲಾರದ, ತಾಳಲಾರದ ಈ ಉಭಯ ಸಂಕಟ ಅವಳನ್ನು ಒಳಗೊಳಗೇ ಕೊರಗುವಂತೆ ಮಾಡಿತ್ತು. ಮನದಲ್ಲಿ ಮೂಡಿಬರುತ್ತಿದ್ದ ಕೆಟ್ಟ ಕಲ್ಪನೆಗಳು ಭಯವನ್ನು ಇನ್ನಷ್ಟು ಹೆಚ್ಚಿಸಿದ್ದವು.
* **
ಆದರೆ ಇಂದು ಕಮಲಮ್ಮ, ಚೆನ್ನಮ್ಮ, ಉಷಾ- ರಾಜೇಶ್ ದಂಪತಿ ತಮ್ಮ ಮಕ್ಕಳ ಈ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಿಕೊಂಡು ಸಂತಸದಿಂದಿದ್ದಾರೆ. ಅವರ ಭವ್ಯ ಭವಿಷ್ಯದ ಕನಸು ಕಾಣುತ್ತಿದ್ದಾರೆ. ಅದಕ್ಕೆ ಕಾರಣ ಸಕಾಲದಲ್ಲಿ ಅವರಿಗೆಲ್ಲಾ ದೊರೆತ `ಸ್ನೇಹ` ಹಸ್ತ.
ಯಾರ `ಸ್ನೇಹ`?
ದೇಶದ ಒಟ್ಟು ಜನಸಂಖ್ಯೆಯ ಮುಕ್ಕಾಲು ಭಾಗದಷ್ಟಿರುವ ಯುವಜನಾಂಗ ಎದುರಿಸುತ್ತಿರುವ ಸಮಸ್ಯೆ ಒಂದೆರಡಲ್ಲ. ಹದಿಹರೆಯದ ಸಂದರ್ಭದ ಅವರ ಶಾರೀರಿಕ, ಮಾನಸಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿ, ಆ ಮೂಲಕ ಅವರನ್ನು ಆರೋಗ್ಯಪೂರ್ಣ ಮಾನವ ಸಂಪನ್ಮೂಲವನ್ನಾಗಿ ರೂಪಿಸುವ ಸಂಗತಿ ಅಷ್ಟೊಂದು ಸುಲಭದ್ದಲ್ಲ.
ಆದರೆ ಅಂತಹದ್ದೊಂದು ಸದುದ್ದೇಶದಿಂದ `ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ`ದ (ಎನ್‌ಆರ್‌ಎಚ್‌ಎಂ) ಅಡಿಯಲ್ಲಿ ಆರಂಭಿಸಲಾಗಿರುವ `ಹದಿಹರೆಯದವರ ಸಂತಾನೋತ್ಪತ್ತಿ ಮತ್ತು ಲೈಂಗಿಕ ಆರೋಗ್ಯ` (ಅಡೋಲಿಸೆಂಟ್ಸ್ ರಿಪ್ರೊಡಕ್ಟಿವ್ ಅಂಡ್ ಸೆಕ್ಷುವಲ್ ಹೆಲ್ತ್- ಎಆರ್‌ಎಸ್‌ಎಚ್) ಎಂಬ ಯೋಜನೆಯಲ್ಲಿ `ಸ್ನೇಹ ಕ್ಲಿನಿಕ್`ಗಳನ್ನು ತೆರೆಯಲಾಗಿದೆ.
ಜಿಲ್ಲಾ ಮತ್ತು ತಾಲ್ಲೂಕು ಆಸ್ಪತೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಗುರುವಾರ ಮಧ್ಯಾಹ್ನ 3ರಿಂದ 5 ಗಂಟೆಯವರೆಗೆ ಮಾತ್ರ ಈ ಕ್ಲಿನಿಕ್ ಕಾರ್ಯ ನಿರ್ವಹಿಸುತ್ತದೆ.ಹದಿಹರೆಯದ, ಅಂದರೆ 10 ರಿಂದ 19 ವರ್ಷದೊಳದೊಳಗಿನ ಯುವಕ/ಯುವತಿಯರು ತಮ್ಮನ್ನು ಬಾಧಿಸುವ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ಪರಿಹಾರಕ್ಕಾಗಿ ಈ ಕ್ಲಿನಿಕ್‌ಗೆ ಭೇಟಿ ನೀಡಿದರೆ, ಇಲ್ಲಿನ ಆರೋಗ್ಯ ಕಾರ್ಯಕರ್ತರು ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಸೂಕ್ತ ಸಲಹೆ ನೀಡುತ್ತಾರೆ.
ಜೊತೆಗೆ ತಜ್ಞ ವೈದ್ಯರಿಂದ ಅಗತ್ಯ ಚಿಕಿತ್ಸೆ ಕೂಡ ಕೊಡಿಸುತ್ತಾರೆ. ಸ್ನೇಹ ಕ್ಲಿನಿಕ್ ಕುರಿತು ಆಶಾ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿ ಮತ್ತು ಎಲ್ಲ ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
ಅನಿಯಮಿತ ಮುಟ್ಟು, ಅತಿಯಾದ ರಕ್ತಸ್ರಾವ, ಮೊಡವೆ, ಚರ್ಮರೋಗಗಳು, ಗುಪ್ತಾಂಗಗಳ ಸಮಸ್ಯೆ, ತಾನು ಸುಂದರವಾಗಿಲ್ಲ, ಕುಳ್ಳಗಿದ್ದೇನೆ, ತಾರತಮ್ಯಕ್ಕೆ ಒಳಗಾಗಿದ್ದೇನೆ ಎನ್ನುವಂತಹ ಕೀಳರಿಮೆಗಳು...
ಹದಿಹರೆಯದಲ್ಲಿ ಸಾಮಾನ್ಯವಾಗಿ ಕಾಡುವ ಇಂತಹ ಹತ್ತು ಹಲವು ಸಮಸ್ಯೆಗಳಿಗೆ ಈ ಕ್ಲಿನಿಕ್‌ನಲ್ಲಿ ಪರಿಹಾರವಿದೆ. ಜೊತೆಗೆ ಬಾಲ್ಯ ವಿವಾಹದ ದುಷ್ಪರಿಣಾಮಗಳು, ಎಚ್‌ಐವಿ/ ಏಡ್ಸ್ ಕುರಿತಾದ ತಿಳಿವಳಿಕೆ, ಆರೋಗ್ಯ ಶಿಕ್ಷಣ ಕೂಡಾ ಇಲ್ಲಿ ಲಭ್ಯ.
ಆತ್ಮೀಯ ಸಾಂತ್ವನ
ಇತ್ತ ಮಕ್ಕಳು ಎನ್ನಲಾಗದ
ಅತ್ತ ವಯಸ್ಕರು ಎಂದು ಕೂಡ ಹೇಳಲಾಗದ ಇವೆರಡರ ಮಧ್ಯದ ಸ್ಥಿತಿಯಲ್ಲಿರುವ ಹದಿಹರೆಯದವರು ಎದುರಿಸುವ
ಸಮಸ್ಯೆಗಳು ಅನೇಕ. ಈ ವಯಸ್ಸಿನಲ್ಲಿ ಹಾರ್ಮೋನ್ ಗ್ರಂಥಿಗಳ ಏರುಪೇರಿನಿಂದ ಉಂಟಾಗುವ ಮಾನಸಿಕ,
ದೈಹಿಕ ಬದಲಾವಣೆಗಳು ಹಾಗೂ ಪಾಲಕರ ಬಳಿ ಹೇಳಿಕೊಳ್ಳಲಾಗದ ಭಯ, ಗೊಂದಲಗಳಿಂದ ನರಳುವ ಅವರಿಗೆ ಸ್ನೇಹ
ಕೇಂದ್ರದಲ್ಲಿ ಆತ್ಮೀಯ ಸಾಂತ್ವನದ ಜತೆಗೆ ಪರಿಹಾರ ದೊರೆಯುತ್ತದೆ.
ಆರೋಗ್ಯ, ನೈರ್ಮಲ್ಯ ಹಾಗೂ ಶುಚಿತ್ವದ ವಿಷಯದಲ್ಲಿ ನಗರ ಪ್ರದೇಶದವರಿಗಿಂತ ಹಿಂದುಳಿದಿರುವ ಗ್ರಾಮೀಣ ಪ್ರದೇಶದ ಹದಿಹರೆಯದವರು ಮತ್ತು ಪಾಲಕರು ಈ ಕ್ಲಿನಿಕ್‌ನ ಸದುಪಯೋಗ ಪಡೆಯಬೇಕು.
-ಡಾ. ಚೆಲುವರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ
ಎಲ್ಲೆಡೆ ಕಾರ್ಯ ನಿರ್ವಹಣೆ
ರಾಜ್ಯದಲ್ಲಿ 2008 -09ನೇ ಸಾಲಿನಲ್ಲಿ ಪ್ರಥಮ ಬಾರಿಗೆ ನಾಲ್ಕು ಜಿಲ್ಲೆಗಳಲ್ಲಿ ಜಾರಿಗೆ ತರಲಾದ ಈ ಯೋಜನೆಯನ್ನು 2009-10ನೇ ಸಾಲಿನಲ್ಲಿ ಎಂಟು ಜಿಲ್ಲೆಗಳಿಗೆ ಹಾಗೂ 2010 -11ನೇ ಸಾಲಿನಲ್ಲಿ 18 ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಈ ಮೂಲಕ ಇಂದು ರಾಜ್ಯದಾದ್ಯಂತ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸುತ್ತಿವೆ.
ಪ್ರಾಥಮಿಕ ಶಾಲೆಗಳಲ್ಲಿ ಜಾರಿಯಲ್ಲಿರುವ ಜಾಗೃತಿ ಕಾರ್ಯಕ್ರಮ `ಕೇಳು ಕಿಶೋರಿ~ಯಲ್ಲಿ ಶಿಕ್ಷಕರ ಮೂಲಕ ಹಾಗೂ ಕೇಂದ್ರ ಸರ್ಕಾರದ ಕಡಿಮೆ ಬೆಲೆಯ `ಸ್ಯಾನಿಟರಿ ನ್ಯಾಪ್ಕಿನ್~ ಯೋಜನೆ ಸದ್ಯ ಜಾರಿಯಲ್ಲಿರುವ ಆರು ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಸಿಬ್ಬಂದಿ ಮೂಲಕ ಹದಿಹರೆಯದವರಿಗೆ ಈ ಕ್ಲಿನಿಕ್ ಕುರಿತು ಮಾಹಿತಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
( ಪ್ರಜಾವಾಣಿ ದಿನಪತ್ರಿಕೆಯ ಭೂಮಿಕಾ ಪುರವಣಿಯಲ್ಲಿ ಶನಿವಾರ, ಆಗಸ್ಟ್ 11, 2012ರಂದು ಪ್ರಕಟವಾದ ಲೇಖನ)

-ಡಾ. ಪರಿಮಳಾ
ಮರೂರ್ಯೋಜನೆಯ ನೋಡಲ್ ಅಧಿಕಾರಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಾಲಾ ಆರೋಗ್ಯ ಹಾಗೂ ಹದಿಹರೆಯದವರ ಆರೋಗ್ಯ ಶಿಕ್ಷಣ ವಿಭಾಗದ ಉಪ ನಿರ್ದೇಶಕಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಾಲಾ ಆರೋಗ್ಯ ಹಾಗೂ ಹದಿಹರೆಯದವರ ಆರೋಗ್ಯ ಶಿಕ್ಷಣ ವಿಭಾಗದ ಉಪ ನಿರ್ದೇಶಕಿ
( ಪ್ರಜಾವಾಣಿ ದಿನಪತ್ರಿಕೆಯ ಭೂಮಿಕಾ ಪುರವಣಿಯಲ್ಲಿ ಶನಿವಾರ, ಆಗಸ್ಟ್ 11, 2012ರಂದು ಪ್ರಕಟವಾದ ಲೇಖನ)

No comments:
Post a Comment