ಬೀನ್ಸ್, ಬೆಂಡೆ, ಬಟಾಣಿ, ಕ್ಯಾರೆಟ್,ಬೀಟ್‌ರೂಟ್, ಚವಳಿ, ಅಲಸಂದೆಗಳಂತೆ ಸೋಯಾ ಅವರೆಯನ್ನು ತರಕಾರಿಯಾಗಿ ಬಳಸಬಹುದು. ಸೋಯಾ ಅವರೆಯಲ್ಲಿ ಶೇ. 40 ರಷ್ಟು ಪ್ರೊಟೀನ್ ಇದೆ. ನಮ್ಮ ದೇಶದಲ್ಲಿ ಸೋಯಾ ಅವರೆಯಿಂದ ಎಣ್ಣೆ ತಯಾರಿಸುತ್ತಾರೆ.
ಕುರುಕಲು ತಿಂಡಿಗಳ ತಯಾರಿಕೆಯಲ್ಲಿ ಹಾಗೂ ಪ್ರಾಣಿಗಳ ಆಹಾರದಲ್ಲೂ ಬಳಸುತ್ತಾರೆ. ವಿದೇಶಗಳಿಗೂ ಅಧಿಕ ಪ್ರಮಾಣದಲ್ಲಿ ಸೋಯಾ ಅವರೆ ರಫ್ತಾಗುತ್ತಿದೆ.
ಸಾಮಾನ್ಯ ಅವರೆಗಿಂತ ಸ್ವಲ್ಪ ದಪ್ಪವಾಗಿರುವ ಸೋಯಾ ಕಾಳುಗಳಲ್ಲಿ ಕ್ಯಾಲ್ಷಿಯಂ, ಕಬ್ಬಿಣ, ಮ್ಯಾಗ್ನಿಶಿಯಂ ಮತ್ತಿತರ ಪೋಷಕಾಂಶಗಳಿವೆ. ಇವು ಮಾನವ ದೇಹಕ್ಕೆ ಅತಿ ಅಗತ್ಯ ಎನ್ನುತ್ತಾರೆ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಯಾದ ಡಾ.ಎಂ. ಸ್ವಾಮಿ.
ತೈವಾನ್‌ನಲ್ಲಿರುವ ‘ಏಷಿಯನ್ ವೆಜಿಟಬಲ್ ರಿಸರ್ಚ್ ಡೆವಲಪ್‌ಮೆಂಟ್ ಸೆಂಟರ್’ (ಎವಿಆರ್‌ಡಿಸಿ) ನಿಂದ ಈ ಸೋಯಾ ಅವರೆಯ ತಳಿಯನ್ನು ರಾಜ್ಯಕ್ಕೆ ತಂದ ಡಾ. ಸ್ವಾಮಿಯ ನೇತೃತ್ವದ ಮೂವರು ವಿಜ್ಞಾನಿಗಳ ತಂಡ ಕೃಷಿ ವಿಶ್ವ ವಿದ್ಯಾಲಯದ ಫಾರಂನಲ್ಲಿ ಮೂರ್ನಾಲ್ಕು ವರ್ಷಗಳ ಕಾಲ ಬೆಳೆಸಿ ಇಲ್ಲಿನ ಹವಾಗುಣಕ್ಕೆ ಹೊಂದಿಕೊಳ್ಳುವಂತೆ ಅಭಿವೃದ್ದಿಪಡಿಸಿ ‘ಕರುಣೆ’ ಎಂದು ನಾಮಕರಣ ಮಾಡಿದ್ದಾರೆ.
ಕರುಣೆ ತಳಿ ಸೋಯಾ ಅವರೆಯನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ, ಹಾಸನ, ದೊಡ್ಡಬಳ್ಳಾಪುರ, ಮಂಡ್ಯ, ಕೋಲಾರ, ಸೇರಿದಂತೆ ಹತ್ತು ಜಿಲ್ಲೆಗಳ ತಲಾ ಇಬ್ಬರು ರೈತರಿಗೆ ಬೀಜ ನೀಡಿ ಬೆಳೆಸಿದೆ. ಎಕರೆಗೆ 2.5 ರಿಂದ 3 ಟನ್ ಸೋಯಾ ತರಕಾರಿ ಅವರೆ ಸಿಗುತ್ತದೆ ಎನ್ನುತ್ತಾರೆ ಡಾ.ಸ್ವಾಮಿ.
ಕರುಣೆ ಸೋಯಾ ಅವರೆ ಬಿತ್ತನೆ ಮಾಡಿದ 60 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಮೇ- ಜೂನ್ ತಿಂಗಳು ಬಿತ್ತನೆಗೆ ಸೂಕ್ತ ಕಾಲ. ನೀರಾವರಿ ಸೌಲಭ್ಯ ಇದ್ದರೆ ಹಿಂಗಾರಿನಲ್ಲೂ ಬಿತ್ತನೆ ಮಾಡಿ ಉತ್ತಮ ಇಳುವರಿ ಪಡೆಯಬಹುದು. ಎಕರೆಗೆ 25 ರಿಂದ 30 ಕೆ.ಜಿ ಬಿತ್ತನೆ ಬೀಜ ಬೇಕಾಗುತ್ತದೆ.
ಆಸಕ್ತ ರೈತರು ಬಿತ್ತನೆ ಬೀಜ, ತರಬೇತಿ ಮತ್ತು ಇತರ ಮಾಹಿತಿಗಾಗಿ ಡಾ. ಸ್ವಾಮಿ ಅವರನ್ನು ಸಂರ್ಪಕಿಸಬಹುದು. ಅವರ ಮೊಬೈಲ್ ನಂಬರ್ -9448087235.
( ಪ್ರಜಾವಾಣಿ ದಿನಪತ್ರಿಕೆಯ ಕರ್ನಾಟಕ ದರ್ಶನ ಪುರವಣಿಯ ಕೃಷಿ ಪುಟದಲ್ಲಿ ಗುರುವಾರ, ಮಾರ್ಚ್ 31, 2011 ರಂದು ಪ್ರಕಟವಾದ ಲೇಖನ)

No comments:
Post a Comment