Tuesday, March 4, 2014

ಕಚೇರಿ ಸ್ಥಳಾವಕಾಶ ಮಾರುಕಟ್ಟೆ ಏರಿಳಿತ


2013ನೇ ಸಾಲಿನಲ್ಲಿ ದೇಶದ ವಾಣಿಜ್ಯ ಬಳಕೆಗಾಗಿ ಕಚೇರಿ ಸ್ಥಳಾವಕಾಶ ಪೂರೈಸುವ ಮಾರುಕಟ್ಟೆಯ ಸ್ಥಿತಿ ಆಶಾದಾಯಕವಾಗಿ ಯೇನೂ ಇರಲಿಲ್ಲ. ಗೃಹ ನಿರ್ಮಾಣ ಕ್ಷೇತ್ರದಂತೆಯೇ ಕಂಪೆನಿಗಳಿಗೆ ಅಗತ್ಯವಾದ ಕಟ್ಟಡಗಳನ್ನೂ, ಕಚೇರಿ ಗಳನ್ನು ನಿರ್ಮಿಸಿ ಮಾರಾಟ ಮಾಡುವ ವಿಭಾಗವೂ ಮಂದಗತಿ ಪ್ರಗತಿ ಕಂಡಿದೆ.


ಇದಕ್ಕೆ ಹಲವು ಕಾರಣಗಳಿವೆ. ಬ್ಯಾಂಕ್‌ಗಳ ಬಡ್ಡಿ ದರ ದುಬಾರಿ ಎನಿಸಿದ್ದುದು, ಮಾರುಕಟ್ಟೆಯಲ್ಲಿ ಹಣದ ಹರಿವು ತಗ್ಗಿದ್ದು ಹಾಗೂ ಕಾರ್ಪೊರೇಟ್‌ ವಲ ಯವೂ ವಹಿವಾಟು ವಿಸ್ತರಣೆ ಚಟುವಟಿಕೆ ತಗ್ಗಿಸಿ ದ್ದುದು ನಿರಾಶಾದಾಯಕ ವಾತಾವರಣ ಸೃಷ್ಟಿಸಿದೆ.

2003ರಿಂದ 2011ರ ನಡುವಿನ ಒಂಬತ್ತು ವರ್ಷಗಳ ಅವಧಿಯಲ್ಲಿದ್ದ ದೇಶದ ಒಟ್ಟಾರೆ ಆರ್ಥಿಕ ಪ್ರಗತಿಗೆ 2013ನೇ ಸಾಲಿನ ಸ್ಥಿತಿಯನ್ನು ಹೋಲಿಸಿದರೆ ನಿರಾಶೆ ಮೂಡಿಸುವ ಅಂಕಿ ಅಂಶಗಳೇ ಗೋಚರಿಸುತ್ತವೆ.
ಅದರಲ್ಲೂ 2013ರ ಜುಲೈ, ಸೆಪ್ಟೆಂಬರ್ ತ್ರೈಮಾ ಸಿಕದಲ್ಲಿ ತುಸು ಆಶಾದಾಯಕ ಬೆಳವಣಿಗೆ ಎನ್ನುವಂತೆ ಆರ್ಥಿಕ ಸ್ಥಿತಿಯಲ್ಲಿ ನಿದಾನವಾಗಿ ಚೈತನ್ಯ ಮೂಡಿತು. ಕೃಷಿ, ಹಣಕಾಸು, ವಿಮೆ, ರಿಯಲ್ ಎಸ್ಟೇಟ್, ಸೇವಾ ವಲಯ ಮತ್ತು ಆಯ್ದ ಮೂಲಸೌಕರ್ಯ ಕ್ಷೇತ್ರಗ ಳಲ್ಲಿ ತಕ್ಕಮಟ್ಟಿಗೆ ಸುಧಾರಣೆ ಕಂಡುಬಂದಿದ್ದರಿಂದ ಆರ್ಥಿಕ ಪ್ರಗತಿ ಶೇ 4.8ರ ಮಟ್ಟಕ್ಕೇರಿತು. ಸ್ವಲ್ಪ ಸಮಾಧಾನವನ್ನೂ ಉಂಟು ಮಾಡಿತು.
ಇಂತಹ ಸಂದರ್ಭದಲ್ಲಿಯೇ ಮಾರುಕಟ್ಟೆಗೆ ಹಣದ ಹರಿವು  ಹೆಚ್ಚಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್‌(ಆರ್‌ಬಿಐ) 2013ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್‌ಗಳಿಗೆ ನೀಡುವ ಸಾಲದ ಬಡ್ಡಿದರವನ್ನು(ರೆಪೊ) ಎರಡು ಬಾರಿ, ಅಂದರೆ ಒಟ್ಟು 50 ಮೂಲಾಂಕಗಳಷ್ಟು (ಶೇ 0.50) ತಗ್ಗಿಸಿತು. ಮತ್ತೆ ಮೇ ತಿಂಗಳಲ್ಲಿಯೂ 25 ಮೂಲಾಂಕಗಳ ಬಡ್ಡಿದರ ಕಡಿಮೆ ಮಾಡಿತು. ಆದರೆ, ಸೆಪ್ಟೆಂಬರ್‌ನಲ್ಲಿ 25 ಮೂಲಾಂಕ ಏರಿಕೆ ಮಾಡಿತು.
ಬ್ಯಾಂಕ್‌ ಬಡ್ಡಿದರ ಹೊರೆ
ನಂತರದಲ್ಲಿ ಡಿಸೆಂಬರ್‌ನಲ್ಲಿ ಹಣಕಾಸು ನೀತಿ ಪರಾಮರ್ಶೆ ವೇಳೆ ರೆಪೊ ದರವನ್ನು ಶೇ 7.75ರಲ್ಲೇ ಉಳಿಸಿಕೊಂಡಿತು. ಬ್ಯಾಂಕ್‌ನ ಈ ನಡೆಯಿಂದಾಗಿ  ಹೊಸ ಗೃಹಸಾಲಗಳ ಬಡ್ಡಿದರದಲ್ಲಿ ಇಳಿಕೆಯಾ ಯಿತು. ಹಾಗಾಗಿ ಆರ್‌ಬಿಐನ ಕ್ರಮಕ್ಕೆ ರಿಯಲ್‌ ಎಸ್ಟೇಟ್ ಉದ್ಯಮ ವಲಯ ಮೆಚ್ಚುಗೆ ವ್ಯಕ್ತಪಡಿಸಿತು.
ರೆಪೊ ದರ ಯಥಾಸ್ಥಿತಿಯಲ್ಲೇ ಉಳಿಸಲು ಆರ್‌ಬಿಐ ನಿರ್ಧರಿಸಿತು. ಗ್ರಾಹಕರ ಹಿತರಕ್ಷಣೆ ಮತ್ತು ಮಾರುಕಟ್ಟೆಗೆ ಹಣದ ಹರಿವು ಹೆಚ್ಚುವಂತೆ ಮಾಡುವ ಆಲೋಚನೆಯಲ್ಲಿ ಆರ್‌ಬಿಐ ಹಲವು ಸುಧಾರಣಾ ಕ್ರಮ ಕೈಗೊಂಡರೂ ಹಣದುಬ್ಬರ ಮೇಲ್ಮುಖವಾ ಗಿಯೇ ಇದ್ದುದು ಕಳವಳಕ್ಕೆ ಕಾರಣವಾಯಿತು.
ಒಟ್ಟಾರೆ ಈ ಎಲ್ಲ ಬೆಳವಣಿಗೆಗಳು ದೇಶದ ರಿಯಲ್ ಎಸ್ಟೆಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಸಕಾರಾತ್ಮಕ ಸೂಚನೆ ತೋರಿದ್ದು, ಇದು ಕ್ರಮೇಣ ಆರ್ಥಿಕ ಚೇತರಿಕೆ ಲಕ್ಷಣ ತೋರುವ ಸಾಧ್ಯತೆಗಳಿವೆ.
ಬೆಲೆ ಇಳಿಕೆಗೆ ಆದ್ಯತೆ
ಈ ಮಧ್ಯೆ, ವಾಣಿಜ್ಯ ಉದ್ದೇಶಕ್ಕೆ ಕಚೇರಿ ಸ್ಥಳಾವ ಕಾಶ ಒದಗಿಸುವ ಮಾರುಕಟ್ಟೆ ಕೂಡ ಬೆಲೆ ಇಳಿಕೆಗೆ ಆದ್ಯತೆ ನೀಡಿತು. ಆದರೆ, ಈ ವಲಯದ ಗ್ರಾಹಕರು ಮಾತ್ರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸು ತ್ತಲೇ ಎಚ್ಚರಿಕೆಯಿಂದ ವ್ಯವಹರಿಸಿದರು.
ಕಂಪೆನಿಗಳ ಹಿಂದೇಟು
ಇನ್ನೊಂದೆಡೆ, ಬಹುತೇಕ ಕಾರ್ಪೊರೇಟ್ ಕಂಪೆನಿ ಗಳು ಸಹ ಹೊಸದಾಗಿ ಕಚೇರಿ ಸ್ಥಳಾವಕಾಶ ಖರೀದಿಗೆ ಮುಂದಾಗದೆ, ಕಂಪೆನಿಯ ವಿಸ್ತರಣಾ ಯೋಜನೆ ಗಳನ್ನು ಮುಂದೂಡುತ್ತಲೇ ಬರುತ್ತಿವೆ. ಅಂದರೆ, ಕಂಪೆನಿಗಳ ನೋಟ ಆದಷ್ಟು ಕಡಿಮೆ ಬೆಲೆಗೆ ಕಚೇರಿ ಸ್ಥಳಾವಕಾಶ ಪಡೆಯುವತ್ತಲೇ ನೆಟ್ಟಿದೆ.
2013ರಲ್ಲಿ ಮೊದಲ ತ್ರೈಮಾಸಿಕದಲ್ಲಿ ಪ್ರಮುಖ ನಗರಗಳಲ್ಲಿ ಒಟ್ಟು 1 ಕೋಟಿ ಚದರಡಿಗಳಷ್ಟು ವಾಣಿಜ್ಯ ಬಳಕೆ ಕಚೇರಿ ಸ್ಥಳಾವಕಾಶ ಹೊಸದಾಗಿ ನಿರ್ಮಾಣಗೊಂಡಿದೆ. ಆದರೆ, 66 ಲಕ್ಷ ಚದರಡಿ ಪ್ರದೇಶವಷ್ಟೇ ಮಾರಾಟವಾಗಿದೆ. ಈ ಮಾರಾಟದ ಪಾಲಿನಲ್ಲಿ ಶೇ 90ರಷ್ಟು ವಹಿವಾಟು ಪ್ರಮುಖವಾಗಿ ಮುಂಬೈ, ಬೆಂಗಳೂರು, ಚೆನ್ನೈ ಮತ್ತು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್‌ಸಿಆರ್)ದಲ್ಲೇ ಆಗಿರುವುದು ಗಮನಾರ್ಹ.
2013ರ ಪ್ರಥಮಾರ್ಧದ ವೇಳೆಗೆ ಸುಮಾರು 2 ಕೋಟಿ ಚದರಡಿಗಳಷ್ಟು ಕಚೇರಿ ಸ್ಥಳಾವಕಾಶವು ಹೊಸದಾಗಿ ನಿರ್ಮಾಣಗೊಂಡಿತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಚೇರಿ ಸ್ಥಳಾವಕಾಶ ನಿರ್ಮಾಣ ಪ್ರಮಾಣದಲ್ಲಿ ಶೇ 16ರಷ್ಟು ಹೆಚ್ಚಳವಾ ಯಿತು. ಆದರೆ, ಇದರಲ್ಲಿ ಕೇವಲ 1.40 ಕೋಟಿ ಚದ ರಡಿಯಷ್ಟು ಕಚೇರಿ ಸ್ಥಳಾವಕಾಶವಷ್ಟೇ ಮಾರಾಟ ವಾಯಿತು. ಇದರಲ್ಲಿ ಬಹುಪಾಲು ಖರೀದಿಯಾ ಗಿದ್ದು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್), ಮುಂಬೈ ಮತ್ತು ಬೆಂಗಳೂರಿ ನಲ್ಲಿಯೇ ಆಗಿದೆ.
3 ಕೋಟಿ ಚದರಡಿ ಸ್ಥಳಾವಕಾಶ
ಮೂರನೇ ತ್ರೈಮಾಸಿಕದ ವೇಳೆಗಂತೂ ದೇಶದ ಪ್ರಮುಖ ರಿಯಲ್ ಎಸ್ಟೆಟ್ ಮಾರುಕಟ್ಟೆಯಲ್ಲಿ  ಒಟ್ಟಾರೆಯಾಗಿ 3 ಕೋಟಿ ಚದರಡಿಗಳಷ್ಟು ಕಚೇರಿ ಸ್ಥಳಾವಕಾಶ ಪ್ರದೇಶವು ಸೃಷ್ಟಿಯಾಗಿತ್ತು. ಆದರೆ ಇನ್ನೊಂದೆಡೆ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಬೇಡಿಕೆ ಕುಸಿಯುತ್ತಲೇ ಸಾಗಿತ್ತು. ಕಚೇರಿ ಸ್ಥಳಾವಕಾಶಕ್ಕೆ ಮಾರುಕಟ್ಟೆಯಲ್ಲಿನ ಬೇಡಿಕೆ 3ನೇ ತ್ರೈಮಾಸಿಕದ ವೇಳೆಗೆ ಶೇ 75ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಳ ಕಚ್ಚಿತು. ಇದಕ್ಕೂ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 50ಕ್ಕೂ ಹೆಚ್ಚಿನ ಕುಸಿತ ಕಂಡಿತ್ತು ಎಂಬುದು ಗಮನಾರ್ಹ.
ಸಿಬಿಆರ್‌ಇ’ ಸಮೀಕ್ಷೆ
‘ಸಿಬಿಆರ್‌ಇ’ ಕೈಗೊಂಡ ಸಮೀಕ್ಷೆಯ ಪ್ರಕಾರ ಕಳೆದ ಹಲವು ತ್ರೈಮಾಸಿಕಗಳಲ್ಲಿ 2013ರ ಜುಲೈ- ಸೆಪ್ಟೆಂಬರ್‌ ಅವಧಿಯಲ್ಲಿ ಕಚೇರಿ ಸ್ಥಳಾವಕಾಶಕ್ಕೆ ಬೇಡಿಕೆಯೇ ಇರಲಿಲ್ಲ. ಇದು ಇತ್ತೀಚಿನ ವರ್ಷಗಳ ಲ್ಲಿಯೇ ಅತಿ ಕಡಿಮೆ ಬೇಡಿಕೆ ಕಂಡ ಅವಧಿಯಾಗಿದೆ.
ಮಾರುಕಟ್ಟೆಯಲ್ಲಿನ ಈ ಪರಿಸ್ಥಿತಿ ಕಚೇರಿಗಳಿಗಾಗಿ ನಿರ್ಮಿಸುತ್ತಿದ್ದ ಕಟ್ಟಡಗಳ ಪೂರ್ಣಗೊಂಡ ಯೋಜನೆಗಳು ಮತ್ತು ನಿರ್ಮಾಣ ಹಂತದಲ್ಲಿರುವ ಯೋಜನೆಗಳ ಮೇಲೆ ಒತ್ತಡ ಹೆಚ್ಚಿತ್ತು.
2013ನೇ ವರ್ಷವು ಒಟ್ಟು 2.5-3 ಕೋಟಿ ಚದರಡಿ ಕಚೇರಿ ಸ್ಥಳಾವಕಾಶದ ಮಾರಾಟದೊಂದಿಗೆ ಕೊನೆಗೊಂಡಿತು. 2012ರಲ್ಲಿ ಈ ಮಾರಾಟ ಪ್ರಮಾಣ 2.60 ಕೋಟಿ ಚದರಡಿಗಳಷ್ಟಿತ್ತು ಎಂಬುದನ್ನೂ ಇಲ್ಲಿ ಉಲ್ಲೇಖಿಸಬೇಕು.ಇದ್ದುದರಲ್ಲಿಯೇ ವರ್ಷದ ಕೊನೆಯ ತಿಂಗಳು ಗಳಲ್ಲಿ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯಲ್ಲಿ ಸ್ವಲ್ಪ ಮಟ್ಟಿಗಿನ ಚೇತರಿಕೆ ಕಂಡುಬಂದಿತು. ಇದರಿಂದಾಗಿ ವರ್ಷಾಂತ್ಯದ ವೇಳೆಗೆ ಕಚೇರಿ ಸ್ಥಳಾವಕಾಶ ಕ್ಷೇತ್ರದಲ್ಲಿ ತುಸು ಹರ್ಷದ ವಾತಾವರಣ ಸೃಷ್ಟಿಯಾಗಿತ್ತು.
ಪ್ರಮುಖ ಗ್ರಾಹಕರು
ಮಾಹಿತಿ ತಂತ್ರಜ್ಞಾನ(ಐಟಿ) ಮತ್ತು ಐ.ಟಿ ಆಧಾರಿತ ಸೇವಾ ಕ್ಷೇತ್ರವೇ ದೊಡ್ಡ ಮಟ್ಟದಲ್ಲಿ ಕಚೇರಿ ಸ್ಥಳಾವಕಾಶಕ್ಕೆ ಬೇಡಿಕೆ ಸಲ್ಲಿಸುವ ಪ್ರಮುಖ  ಕಾರ್ಪೋರೆಟ್ ಗ್ರಾಹಕರಾಗಿವೆ.ಜತೆಗೆ ಸಂಶೋಧನಾ ಸಂಸ್ಥೆಗಳು, ಎಂಜಿನಿಯ ರಿಂಗ್ ಮತ್ತು ಉತ್ಪಾದನಾ ವಲಯ ಸೇರಿದಂತೆ ಹಲವು ಕ್ಷೇತ್ರಗಳು ಕೂಡ ವಿಶೇಷವಾಗಿ ಕಚೇರಿ ಸ್ಥಳಾವಕಾಶ ಕ್ಷೇತ್ರಕ್ಕೆ ಇತ್ತೀಚೆಗೆ ಬೇಡಿಕೆ ಹೆಚ್ಚಿಸುತ್ತಿವೆ.
ವಿಶೇಷವೆಂದರೆ ಈ ಕ್ಷೇತ್ರಗಳ ಹೊರತಾಗಿಯೂ 2013ನೇ ಸಾಲಿನಲ್ಲಿ ದೇಶದ ಪ್ರಮುಖ ನಗರಗ ಳಲ್ಲಿನ ವಾಣಿಜ್ಯ ಉದ್ದೇಶದ ಕಚೇರಿ ಸ್ಥಳಾವಕಾಶ ವಿಭಾಗದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ವಹಿವಾಟು(20 ಸಾವಿರ ಚದರಡಿಗಿಂತ ಕಡಿಮೆ ಅಳತೆಯದ್ದು) ಮಹತ್ವದ ಪ್ರಭಾವ ಬೀರುತ್ತಿವೆ.
ವರ್ಷವಿಡೀ ಏಳು ಬೀಳು ಎರಡನ್ನೂ ಕಂಡ ರಿಯಲ್‌ ಎಸ್ಟೇಟ್‌ ಉದ್ಯಮ, 2013ರಲ್ಲಿ ಕೆಲವು ಮಹತ್ವದ ಕರಾರುಗಳಿಗೆ ಕೂಡ ಸಾಕ್ಷಿಯಾಗಿದೆ. ವಿಶೇಷ ಆರ್ಥಿಕ ವಲಯವೊಂದೇ (ಎಸ್‌ಇಜೆಡ್) 50 ಲಕ್ಷ ಚದರಡಿಗೂ ಅಧಿಕ ಪ್ರದೇಶದ ಕರಾರನ್ನು ಅಂತಿಮಗೊಳಿಸುವ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.ಸೂಕ್ತ ಜಾಗದ ಬಳಕೆ, ವೆಚ್ಚ ಕಡಿತದ ಕ್ರಮಗಳು ಮತ್ತು ವ್ಯವಹಾರ ಚಟುವಟಿಕೆಗಳು ಮೇಲೆ ನಿರಂತರ ವಾಗಿ ದೃಷ್ಟಿ ನೆಟ್ಟಿರುವ ಕಾರ್ಪೋರೆಟ್ ಕಂಪೆನಿಗಳು ಸಣ್ಣ ಮತ್ತು ಮಧ್ಯಮ ಗಾತ್ರದ ಸ್ಥಳಾವಕಾಶವನ್ನು ಪಡೆದುಕೊಳ್ಳುವುದನ್ನು ಸದ್ಯ ನಿರ್ಬಂಧಿಸಿದಂತೆ ಕಂಡು ಬರುತ್ತಿದೆ.
ಜಾಗತಿಕ ಮತ್ತು ದೇಶಿಯ ಅರ್ಥ ವ್ಯವಸ್ಥೆಯಲ್ಲಿ ಪುನಶ್ಚೇತನದ ಲಕ್ಷಣಗಳು  ಕಂಡುಬಂದಿದ್ದು, ಇದು ಹೊಸ ವರ್ಷಕ್ಕೆ ಉತ್ತಮ ವಹಿವಾಟಿನ ಕೊಡುಗೆ ನೀಡುವುದರೊಂದಿಗೆ 2014ರ  ದ್ವೀತಿಯಾರ್ಧ ವೇಳೆಗೆ ದೇಶದ ಆರ್ಥಿಕ ಸ್ಥಿತಿಗತಿಯನ್ನು ಉತ್ತಮ ಗೊಳಿಸುವ ನಿರೀಕ್ಷೆಯೂ ಇದೆ.
ದೇಶದ ಪ್ರಮುಖ ನಗರಗಳಲ್ಲಿ  ನಿರ್ಮಾಣ ಗೊಂಡಿರುವ ವಾಣಿಜ್ಯ ಕಚೇರಿ ಸ್ಥಳಾವಕಾಶಕ್ಕೆ 2017ರ ವರ್ಷಾಂತ್ಯದ ವೇಳೆಗೆ ಒಟ್ಟಾರೆಯಾಗಿ 14ರಿಂದ -15 ಕೋಟಿ ಚದರಡಿ ಸ್ಥಳವು ಹೊಸದಾಗಿ ಸೇರ್ಪಡೆಯಾಗುವ ನಿರೀಕ್ಷೆ ಯಿದೆ.2014ರಲ್ಲಿ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಗೆ ಕಚೇರಿ ಸ್ಥಳಾವಕಾಶ ನಿರ್ಮಾಣ ವಿಭಾಗದ ಕೊಡುಗೆ ಗಣನೀಯ ಮಟ್ಟದಲ್ಲಿ ಏರಿಕೆ ಕಾಣಲಿದೆ. ಗುಡಗಾಂವ್, ಥಾಣೆ ಮತ್ತು ನವ ಮುಂಬೈಯಂತಹ ಆಯ್ದ ಮಾರುಕಟ್ಟೆಗಳಲ್ಲಿನ ಕಚೇರಿ ಮತ್ತು ವಾಣಿಜ್ಯ ಕಟ್ಟಡಗಳ ಬಾಡಿಗೆ ದರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ.
ವಾಣಿಜ್ಯ ಕಚೇರಿ ಸ್ಥಳಾವಕಾಶವು ವಿಸ್ತರಣೆಯಾ ಗುವ ಸಾಧ್ಯತೆಯು ಈ ಕ್ಷೇತ್ರದಲ್ಲಿರುವ ಅಡೆತಡೆಗಳನ್ನು ನಿವಾರಿಸುವುದರೊಂದಿಗೆ ಕ್ಷೇತ್ರದ ಬೆಳವಣಿಗೆ ಮತ್ತು ಪ್ರಸಕ್ತ ನೀತಿ ಕ್ರಮಗಳನ್ನು ಪರಿಣಾಮಕಾರಿ ಜಾರಿಗೊಳಿಸುವ ಸಮರ್ಥ ಅವಕಾಶಗಳ ಒದಗಿಸಲಿದೆ.

ನಿಧಾನಗತಿಯ ಯೋಜನೆ ಅನುಮತಿ ಪ್ರಕ್ರಿಯೆ ಗಳು, ಪೂರೈಕೆಯ ಬಿಕ್ಕಟ್ಟು ಇವುಗಳಲ್ಲಿ ಸುಧಾರಣೆಯು ಅಗತ್ಯವಾಗಿದ್ದು, ಇದರ ಮೂಲಕ ವಿದೇಶಿ ಬಂಡವಾಳ ನೇರ ಹೂಡಿಕೆಯ ಚಿಲ್ಲರೆ ಮಾರುಕಟ್ಟೆ ಮತ್ತು ಖಾಸಗಿ -ಸಾರ್ವಜನಿಕ ಸಹಭಾಗಿತ್ವದ ಯೋಜನೆಗಳಂತಹ ಪ್ರಮುಖ ಕ್ಷೇತ್ರಗಳಿಗೆ ಬಾಗಿಲು ತೆರೆದಿಡಬೇಕಿದೆ.
(ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಜನವರಿ 15, 2014 ರಂದು ಪ್ರಕಟವಾದ ಲೇಖನ)

No comments:

Post a Comment