ದೇಶದ ಖಜಾನೆಗೆ ಅತಿದೊಡ್ಡ ಆದಾಯವನ್ನು ಸಂಗ್ರಹಿಸಿಕೊಡುತ್ತಾ, ತೆರಿಗೆ ನೀತಿಗಳ ಬಗ್ಗೆ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡುವುದರೊಂದಿಗೆ ತೆರಿಗೆ ಕ್ಷೇತ್ರದ ಒಟ್ಟಾರೆ ಆಡಳಿತ ಹೊಣೆಯನ್ನು ನೋಡಿಕೊಳ್ಳುತ್ತಿರುವ ‘ಕೇಂದ್ರ ತೆರಿಗೆ ಮಂಡಳಿ’ಗೆ ಕೊನೆಗೂ ತನ್ನದೇ ಆದ ಪ್ರತ್ಯೇಕ ಪ್ರಧಾನ ಕಚೇರಿಯನ್ನು ಹೊಂದುವ ಭಾಗ್ಯ ಕೂಡಿ ಬಂದಿದೆ.
ಇತ್ತೀಚೆಗೆ ಪ್ರಧಾನಮಂತ್ರಿ ಮನ ಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ’ಯು (ಸಿಸಿಇಎ) ನವದೆಹಲಿಯಲ್ಲಿ ಅಂದಾಜು ರೂ. 485.16 ಕೋಟಿ ವೆಚ್ಚದಲ್ಲಿ ಕೇಂದ್ರ ತೆರಿಗೆ ಇಲಾಖೆಯ ಪ್ರಧಾನ ಕಚೇರಿ ‘ರಾಜಸ್ವ ಭವನ’ ಸಂಕೀರ್ಣ ನಿರ್ಮಿಸುವ ಉದೇಶಿತ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಸದ್ಯ, ‘ಕೇಂದ್ರದ ನೇರ ತೆರಿಗೆಗಳ ಮಂಡಳಿ’ (ಸಿಬಿಡಿಟಿ) ಮತ್ತು ‘ಕೇಂದ್ರ ಅಬಕಾರಿ ಹಾಗೂ ಸುಂಕ ಮಂಡಳಿ’ (ಸಿಬಿಇಸಿ) ಪ್ರಧಾನ ಕಚೇರಿಗಳೆರಡೂ ನಾರ್ತ್ ಬ್ಲಾಕ್‌ನಲ್ಲಿವೆ. ಎರಡೂ ಕಚೇರಿಗಳಲ್ಲಿನ ಸಿಬ್ಬಂದಿ ಮತ್ತು ಕಚೇರಿಗೆ ಬಂದು ಹೋಗುವ ತೆರಿಗೆದಾರರಿಂದ ಉಂಟಾಗುತ್ತಿರುವ ಜನದಟ್ಟಣೆ ತಪ್ಪಿಸುವ ಉದ್ದೇಶ ಹಾಗೂ ಒಂದೇ ಸೂರಿನಡಿ ಈ ಎರಡೂ ಮಂಡಳಿಗಳ ಪ್ರಧಾನ ಕಚೇರಿಗಳನ್ನು ತರುವ ನಿಟ್ಟಿನಲ್ಲಿ ನೂತನ ‘ರಾಜಸ್ವ ಭವನ’ ನಿರ್ಮಿಸಲು ಉದ್ದೇಶಿಸಲಾಗಿದೆ.
ದಿನೇ ದಿನೇ ತೆರಿಗೆ ಸಂಗ್ರಹದಲ್ಲಾಗುತ್ತಿರುವ ಹೆಚ್ಚಳದ ಪರಿಣಾಮ ನಿರ್ದೇಶನಾಲಯಗಳ ಕಾರ್ಯವ್ಯಾಪ್ತಿ ಮತ್ತು ಸಾಮರ್ಥ್ಯ ವಿಸ್ತರಣೆ ಗೊಳ್ಳುವು ದರ ಜತೆಗೆ ಮಂಡಳಿಗಳ ಸಿಬ್ಬಂದಿ ಸಂಖ್ಯೆ ಯನ್ನೂ ಹೆಚ್ಚಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಎಲ್ಲವನ್ನೂ ನಾರ್ತ್ ಬ್ಲಾಕ್‌ನ ತೆರಿಗೆ ಇಲಾಖೆಗೆ ಮೀಸಲಿಟ್ಟ ಸ್ಥಳದಲ್ಲಿಯೇ ಸರಿದೂಗಿಸಲು ಅಸಾಧ್ಯ ವಾದ ಹಿನ್ನೆಲೆಯಲ್ಲಿ ಪರ್ಯಾಯವಾಗಿ ‘ರಾಜಸ್ವ ಭವನ’ ನಿರ್ಮಾಣದ ಪ್ರಸ್ತಾವನೆಯನ್ನು ಸಲ್ಲಿಸಲಾಯಿತು ಎನ್ನುತ್ತಾರೆ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು.
5.65 ಎಕರೆಯಲ್ಲಿ...
ಉದ್ದೇಶಿತ ರಾಜಸ್ವ ಭವನ ಸಂಕೀರ್ಣವು ರಾಜಧಾನಿಯ ಹೃದಯ ಭಾಗದಲ್ಲಿರುವ ಕಸ್ತೂರ್‌ಬಾ ರಸ್ತೆಯಲ್ಲಿ 5.65 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ.
ರಾಜಸ್ವ ಭವನ ಸಂಕೀರ್ಣದಲ್ಲಿ ಕೇಂದ್ರ ಹಣಕಾಸು ಖಾತೆ ಸಚಿವರು ಮತ್ತು ರಾಜ್ಯ ಸಚಿವರಿಗೆ ಸೇರಿದಂತೆ ‘ಸಿಬಿಡಿಟಿ’ ಹಾಗೂ ‘ಸಿಬಿಇಸಿ’ಯ ಅಧ್ಯಕ್ಷರು, ನಿರ್ದೇಶಕರು, ನೌಕರರು ಹಾಗೂ ಸಹಾಯಕ ಸಿಬ್ಬಂದಿಗಳ ಕಚೇರಿ ಗಳೊಂದಿಗೆ ಜಿ.ಎ.ಆರ್ ವಿಭಾಗಗಳು ಕೂಡ ಕಾರ್ಯನಿರ್ವಹಿಸಲಿವೆ.
ವಿಸ್ತರಣೆಗೆ ಅವಕಾಶ
ಆವರಣದಲ್ಲಿ ಸದಾಕಾಲ ಗಿಡ, ಬಳ್ಳಿಗಳ ಹಸಿರು ಹೊದಿಕೆ ಇರುವುದರ ಜತೆಗೆ ಕಟ್ಟಡ ಸಂಪೂರ್ಣವಾಗಿ ಪಾರದರ್ಶಕವಾಗಿರುವಂತೆ ಹಾಗೂ ಬಹಳ ಸುಸಜ್ಜಿತವಾಗಿ ನಿರ್ಮಿಸಲು ಉದ್ದೇಶಿಸಲಾಗಿರುವ ಈ ಸಂಕೀರ್ಣದಲ್ಲಿ ಭವಿಷ್ಯದಲ್ಲಿ ಅಗತ್ಯ ಬೀಳುವ ಸ್ಥಳಾವಕಾಶಕ್ಕಾಗಿ ಕಟ್ಟಡವನ್ನು ವಿಸ್ತರಣೆ ಮಾಡಲೂ ಅವಕಾಶವಿರುವಂತೆ ಯೋಜನೆ ರೂಪಿಸಲಾಗಿದೆ.
ಸ್ಥಳೀಯ ಹವಾಗುಣ, ಪರಿಸರ ಸ್ನೇಹಿ ವ್ಯವಸ್ಥೆ, ಸಾರ್ವಜನಿಕರಿಗೆ ಸುಲಭ ಪ್ರವೇಶದ ಅಂಶಗಳು ಸೇರಿದಂತೆ ಇತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭವನದ ಪ್ರಸ್ತಾವಿತ ವಿನ್ಯಾಸವನ್ನು ಪರಿಗಣಿಸಲು ಐವರು ವಿಶೇಷ ವಾಸ್ತುಶಿಲ್ಪಿಗಳು ಮತ್ತು ಕಂದಾಯ ಇಲಾಖೆ ಹಾಗೂ ಹಣಕಾಸು ಸಚಿವಾಲಯ ಪ್ರತಿನಿಧಿಸುವ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ಸಮಿತಿ ಯೊಂದನ್ನು ರಚಿಸಲಾಗಿದೆ.
‘ಸಿಬಿಡಿಟಿ’ ಮತ್ತು ‘ಸಿಬಿಇಸಿ’ ಮಂಡಳಿಗಳನ್ನು ಒಂದೇ ಸೂರಿನಡಿ ತರುವುದರಿಂದ ಸಂಬಂಧಿತ ಕಚೇರಿಗಳ ನಡುವಿನ ಕೆಲಸಕಾರ್ಯಗಳ ಸಾಮರ್ಥ್ಯ ಹೆಚ್ಚಳವಾಗುವುದು. ಜತೆಗೆ ಅಗತ್ಯ ಮೂಲ ಸೌಕರ್ಯಗಳು ಲಭ್ಯವಾಗುವುದರಿಂದ ಒಟ್ಟಾರೆ ತೆರಿಗೆ ಆಡಳಿತದಲ್ಲಿ ಉತ್ತಮ ಕೆಲಸದ ವಾತಾವರಣ ಮೂಡಿಸಲು ಇದು ಸಹಕಾರಿಯಾಗಲಿದೆ ಎನ್ನುತ್ತವೆ ತೆರಿಗೆ ಇಲಾಖೆಯ ಮೂಲಗಳು.
(ಪ್ರಜಾವಾಣಿ ದಿನಪತ್ರಿಕೆಯ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಅಕ್ಟೋಬರ್ 02, 2013 ರಂದು ಪ್ರಕಟವಾದ ಲೇಖನ)
![]() |

No comments:
Post a Comment